For Donations
Denige

Name: Sri Koragajja Seva Samithi
Bank Name: Canara Bank
Account Number: 110068990506
IFSC: CNRB0001602



(Please Note: after making the payment please WhatsApp the screenshot of the payment to 7349549184)

For all sevas

Name: Sri Koragajja Seva Samithi
Bank Name: UNION BANK
Account Number: 119922010001083
IFSC: UBIN0911992



(Please Note: after making the payment please WhatsApp the screenshot of the payment to 7349549184)


For Bangarada Muttale

Name: Sri Koragajja Kshethra Urwa, Boloor
Bank Name: Bank of Baroda
Account Number: 73600100009234
IFSC: BARB0VJASDA (Fifth Character is Zero)



(Please Note: after making the payment please WhatsApp the screenshot of the payment to 7349549184)

ಶ್ರೀ ಕ್ಷೇತ್ರದಲ್ಲಿ ನಡೆಯುವ ಸೇವೆಗಳು

ಪ್ರಾರ್ಥನೆ ಸೇವೆ : ರೂ. 100.00
ಹೂವಿನ ಅಲಂಕಾರ : ರೂ. 250.00
ಹೂವಿನ ಅಲಂಕಾರ (ಅಗೇಲು ಸೇವಾ ದಿನಾಂಕದಂದು) : ರೂ. 500.00
ಸಂಕ್ರಮಣದ ಸಂಪೂರ್ಣ ಸೇವೆ : ರೂ. 1500.00
ಪ್ರತೀ ತಿಂಗಳ ಅಗೇಲು ಸೇವೆ : ರೂ. 650.00
ಸಾಮೂಹಿಕ ಹರಕೆ ಕೋಲ : ರೂ. 15,000.00
ವೈಯಕ್ತಿಕ ಹರಕೆ ಕೋಲ : ರೂ. 95,000.00
ನಿತ್ಯ ಹೂವಿನ ಸೇವೆ (ಒಂದು ತಿಂಗಳ ಮೊತ್ತ) : ರೂ. 2500.00

ವಿಶೇಷ ಸೂಚನೆಗಳು

• ಸಂಕ್ರಮಣ ಪೂಜೆ ರಾತ್ರಿ 7.00ರಿಂದ 8.30ರ ವರೆಗೆ ನಡೆಯುವುದು.
• ಸಂಕ್ರಮಣದ ಸೇವಾ ರಶೀದಿಯನ್ನು ಅದೇ ದಿನ ನೀಡಲಾಗುವುದು.
• ಪ್ರತೀ ತಿಂಗಳ ಕೋಲ ಸೇವೆಗೆ ಹೆಸರನ್ನು ಒಂದು ತಿಂಗಳ ಮೊದಲೇ ನೊಂದಾಯಿಸಬೇಕು.
• ಮಾಸಿಕ ಅಗೇಲು ಸೇವೆ ಪ್ರತೀ ತಿಂಗಳ ಕಡೇಯ ಶನಿವಾರ ಸಂಜೆ ಗಂಟೆ 5.00ಕ್ಕೆ ಸರಿಯಾಗಿ ಪ್ರಾರಂಭವಾಗುವುದು.
• ಅಗೇಲು ಸೇವೆಯನ್ನು ಸೇವಾ ದಿನಾಂಕದ ಮೊದಲು ಕ್ಷೇತ್ರಕ್ಕೆ ಬಂದು ನೋಂದಾಯಿಸಿ ಸೂಕ್ತ ರಶೀದಿಯನ್ನು ಪಡೆದುಕೊಳ್ಳಬೇಕು.
• ಟೋಕನ್ ನಂಬರ್ ಪ್ರಕಾರ ಅಗೇಲು ನೀಡಲಾಗುವುದು.
• ಟೋಕನ್ ನಂಬರ್ ಕರೆದಾಗ ಬಾರದೆ ಇದ್ದಲ್ಲಿ ಆ ನಂಬ್ರನ್ನು ಕೊನೆಯಲ್ಲಿ ಪುನಃ ಕರೆಯಲಾಗುವುದು.
• ಅಗೇಲು (ಅನ್ನ) ಪ್ರಸಾದವನ್ನು ಕಡ್ಡಾಯವಾಗಿ ಕೊಂಡು ಹೋಗತಕ್ಕದ್ದು. (ಸಸ್ಯಹಾರಿ ಸೇವಾದಾರರನ್ನು ಹೊರತುಪಡಿಸಿ)
• ಅಗೇಲು ಸೇವೆಯನ್ನು ದೂರವಾಣಿ ಮೂಲಕ ನೋಂದಾಯಿಸಬಹುದು.
• ಸೇವಾದಾರರು ನೀಡುವ ಹೂ, ಸೀಯಾಳ, ಎಣ್ಣೆಯನ್ನು ಸ್ವೀಕರಿಸಲಾಗುವುದು.
• ನೀವು ನೀಡುವ ಕಾಣಿಕೆಯನ್ನು "ಕಾಣಿಕೆ ಹುಂಡಿಗೆ" ಹಾಕಬೇಕು.
• ಯಾವುದೇ ವ್ಯಕ್ತಿಗತ ಹಣ ನೀಡುವುದು ಕಾಣಿಕೆ ನೀಡುವುದು ಮಾಡಬಾರದು.
• ನೀವು ನೀಡುವ ಸೇವೆಗೆ ಸೂಕ್ತ ರಶೀದಿ ಪಡೆಯಬೇಕು.
• ಡೊನೇಷನ್ ನೀಡಿದಲ್ಲಿ ಸೂಕ್ತ ರಶೀದಿ ಪಡೆಯಬೇಕು.
• ಕೋಲ ಸೇವೆ ನೀಡುವವರು ಲುಂಗಿ, ಶಾಲು, ಮಹಿಳೆಯರು ಸೀರೆಯಲ್ಲಿ ಅಜ್ಜನ ಪ್ರಸಾದ ಸ್ವೀಕರಿಸಬೇಕು.
• ಕೋಲ ಸೇವೆ ಸಂದರ್ಭ ಅಜ್ಜನ ಕರಿಗಂಧ ಪಡೆಯಲು ಮಹಿಳೆಯರು ಶಾಲು ವಸ್ತು ಕಡ್ಡಾಯ.
• ನಿತ್ಯ ದರ್ಶನಕ್ಕೆ ಬರುವ ಭಕ್ತರು ವಸ್ತು ಸಂಹಿತೆಯನ್ನು ಪಾಲಿಸಬೇಕು.
• ಶುಚಿತ್ವವನ್ನು ಕಾಪಾಡಿ ಅಂಗಣದಲ್ಲಿ ಏರುಧ್ವನಿಯಲ್ಲಿ ಮಾತನಾಡಕೂಡದು ಹಾಗೂ ಶಿಸ್ತನ್ನು ಪಾಲಿಸಬೇಕು.
• ಭಕ್ತರು ನೀಡುವ ಸೂಕ್ತ ಸಲಹೆಗಳನ್ನು ಪರಿಗಣಿಸಲಾಗುವುದು.
Contact: 7349549184

Offers for Koragajja
ಅರ್ಪಣೆಗಳ ವಿವರ

ಬೀಡ, ಚಕ್ಕುಲಿ, ಶೇಂದಿ



UPCOMING EVENTS

19ನೇ ವಾರ್ಷಿಕ ನೇಮೋತ್ಸವ, ದಿನಾಂಕ 17-04-2025 ರಿಂದ 20-04-2025 ರ ವರೆಗೆ. 17-04-2025 ರಂದು ಬೆಳಗ್ಗೆ 8.30 ಕ್ಕೆ ಕ್ಷೇತ್ರದ ಶ್ರೀ ದೈವಗಳಿಗೆ ನವಕ ಕಲಶ. 18-04-2025 ರಂದು ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ಸೀಯಾಳಾಭಿಷೇಕ. 19-04-2025 ರಂದು ಸಂಜೆ 6.30 ಕ್ಕೆ ಶ್ರೀ ಚಾಮುಂಡೇಶ್ವರಿ ಕತ್ತಲೆಕಾನ ಗುಳಿಗ ದೈವಗಳ ಸಿರಿ ಸಿಂಗಾರದ ನೇಮೋತ್ಸವ. ರಾತ್ರಿ 8.30 ಕ್ಕೆ ಅನ್ನಸಂತರ್ಪಣೆ. 20-04-2025 ರಂದು ಕ್ಷೇತ್ರದ ಪ್ರಧಾನ ದೈವ ಸಾರಲ ಪಟ್ಟದ ಕೊರಗಜ್ಜನಿಗೆ ದೊಂದಿ ಬೆಳಕಿನ (ತುಡರ ಕೋಲ) ಸೇವೆ ನಡೆಯಲಿದೆ. ನಂತರ ಅಗೇಲು ಸೇವೆ - ಗಂಧ ಪ್ರಸಾದ ವಿತರಣೆ. ರಾತ್ರಿ 8.30 ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ. ಆತ್ಮಿಯ ಭಗವದ್ ಭಕ್ತರೇ ಈ ಎಲ್ಲಾ ಕಾರ್ಯಕ್ರಮಕ್ಕೆ ತಮ್ಮನ್ನು ಪ್ರೀತಿಪೂರ್ವಕ ಸ್ವಾಗತಿಸುತಿದ್ದೇವೆ.