Shree Koragajja Kshetra, Urwa Boloor is one among the numerous deities settled and known for their
blissful presence on the life and routine of Tulunadu in protecting the aggrieved devotees andpunishing the
one who slips from his Dharma. From the folklore of Pardana and the divine wordings of theSpirit, one can
understand the blissful presence of prime deity of the Kshetra, Koraga Taniya.
With the grace and power of Lord Shiva, he was born to Oravana Odi and Korapolu Maire who lived at
Panambur Patta Sale. He lost both his parents in his infancy itself and though he lost the legacy of whole
Koraga cult of Seven Koppas and was deeply moved by the grief of orphan hood, he was found by
Mairakke Baidedi who was a resident of Insura Barke, an area different from his Koppa. She took care of
him and looked after as her own son as one among her children.
As the time passed, he was grown up and used to do the work of his cult. When Mairakke Baidedi could
not find a help to carry the items required for performing Nema to her family deities, tender coconuts, tiri
(derived from coconut trees) and bale (tender trunk of banana plantain) etc., he assured her that he can
carry theload of seven persons all alone. And he will himself carry the load and later becomes a victim of
fiercely anger of the deities of Mairakke family at the sacred Kadri Kshetra. Its here he leaves his physical
body and gains the mystical divine presence and with which he takes the blessings of Kadri Manjunatha
and after covering the Northern State with his blissful aura, he proceeds to Southern State with the similar
purpose. The place where he meets Urva Boloor Mariyamma by setting his mystical presence in a small
stone in the Western seabed is now well known as Koragajja Kshetra, Urwa Boloor
Later his holiness visits Kuttar Sarala Patta and meets Shri Somanatheshwara at Someshwar and
pronounced as one of the Monitoring Deity among Pajandaya, Banta and Vaidyanatha dieties of the State
which was then under the ordinance of Kuttar King of three villages. The name and fame of blissful
presence of Swami Koragajja is now popular vide and wast of Tulunadu.
It is proposed to dedicate Golden Muttale to Koragajja of Shri Kshetra in the coming year, on 19/04/2025
ತುಳುನಾಡಿನ ಅದೆಷ್ಟೋ ದೈವಗಳು ತಮ್ಮ ಕಾರ್ಣಿಕವನ್ನು ತೋರಿಸಿ ಪುಣ್ಯ ಕ್ಷೇತ್ರದಲ್ಲಿ ನೆಲೆ ನಿಂತು ಧರ್ಮ ತಪ್ಪಿ ನಡೆದವರಿಗೆ ತಕ್ಕ ಶಿಕ್ಷೆ ಯನ್ನು ನೀಡಿ ಬಳಲಿ ಬಂದ ಭಕ್ತರಿಗೆ ಅವರ ಕಷ್ಟಗಳನ್ನು ಪರಿಹರಿಸಿ ಕೊಟ್ಟಂತಹ ಕ್ಷೇತ್ರಗಳಲ್ಲಿ ಶ್ರೀ ಕೊರಗಜ್ಜ ಕ್ಷೇತ್ರ ಉರ್ವ ಬೋಳೂರು ಕೂಡಾ ಒಂದು. ಕ್ಷೇತ್ರದ ಪ್ರಧಾನ ಶಕ್ತಿ ಕೊರಗ ತನಿಯ ದೈವವೂ ಈ ಕ್ಷೇತ್ರದಲ್ಲಿ ನೆಲೆ ನಿಂತ ಪರಿಯನ್ನು ಶ್ರೀ ದೈವದ ನುಡಿಕಟ್ಟು ಹಾಗೂ ಪಾರ್ದನದ ಮೂಲಕ ತಿಳಿದು ಬರುತ್ತದೆ.
ಪಣಂಬೂರು ಪಟ್ಟ ಸಾಲೆಯಲ್ಲಿ ಒರವನ ಓಡಿ ಹಾಗೂ ಕೊರಪೊಳು ಮೈರೆ ದಂಪತಿಗಳಿಗೆ ಈಶ್ವರ ದೇವರ ಅಂಶ ಸಂಭೂತ ಮಗನಾಗಿ ಜನಿಸಿ ತನಿಯ ಎಂಬ ಹೆಸರಿನಲ್ಲಿ ತನ್ನನು ಕರೆಸಿಕೊಂಡು ಮಗು ಇದ್ದಾಗಲೇ ತಂದೆ - ತಾಯಿಯನ್ನು ಕಳೆದುಕೊಂಡು ತನ್ನ ವಂಶದ ಏಳು ಕೊಪ್ಪದ ಕೊರಗ ಸಮುದಾಯದವರು ಅಳಿದು ಹೋದರು ದಿಕ್ಕು ದೆಸೆ ಇಲ್ಲದ ಸಮಯದಲ್ಲಿ ಅತೀವ ದುಃಖದಿಂದ ತನ್ನ ಕೊಪ್ಪವನ್ನು ಬಿಟ್ಟು ಕದ್ರೆಯ ಇನ್ಸೂರ ಬರ್ಕೆ ಮೈರಕ್ಕೆ ಬೈದೆದಿ ಯವರಿಗೆ ಸಿಕ್ಕಿದಂತಹ ತನ್ನವರು ಯಾರೂ ಇಲ್ಲದ ಅನಾಥ ಮಗು ತನಿಯನನ್ನು ತನ್ನ ಬರ್ಕೆಯಲ್ಲಿ ತನ್ನ ಮಕ್ಕಳ ಜೊತೆ ಇವನನ್ನು ತನ್ನ ಮಗನಂತೆ ಸಾಕಿದಳು.
ಸಮಯ ಕಳೆದಂತೆ ತನಿಯನು ದೊಡ್ಡವನಾಗಿ ತನ್ನ ಕುಲ ಜನ್ಮದ ಕೆಲಸವನ್ನು ಮಾಡುತ್ತಿದನು. ಮೈರಕ್ಕೆ ಬೈದೆದಿ ತನ್ನ ಮೂಲದ ದೈವಗಳಿಗೆ ಧರ್ಮ ನೇಮಕ್ಕೆ ಸೀಯಾಳ -ತಿರಿ -ಬಾಳೆ (ತೆಂಗಿನ ಎಳಾತ್ತು ಸೋಗೆ ಹಾಗೂ ಬಾಳೆದಿಂಡು ) ಹೊರಲು ಕೆಲಸದ ಆಳು ಸಿಗದ ಸಮಯದಲ್ಲಿ ಏಳು ಮಂದಿ ಹೊರುವ ಹೊರೆಯನ್ನು ಒಬ್ಬನೇ ಹೊರುತ್ತೇನೆ ಎಂದು ಮೈರಕ್ಕೆ ಬೈದೆದಿಯಲ್ಲಿ ಹೇಳಿ ಹೊರೆ ಹೊತ್ತು ಹೋಗುತ್ತಾನೆ ನಂತರ ಕದ್ರಿಯ ಪುಣ್ಯ ಸನ್ನಿಧಿಯಲ್ಲಿ ಮೈರಕ್ಕೆಯ ಮೂಲದ ದೈವದ ಉಗ್ರ ದೃಷ್ಟಿಗೆ ತುತ್ತಾಗಿ ಕಾಯದ ದೇಹವನ್ನು ಬಿಟ್ಟು ಮಾಯದ ದೈವತ್ವ ಪಡೆದು ಕದ್ರಿ ಮಂಜುನಾಥ ದೇವರ ಪಾದಕ್ಕೆ ವಂದಿಸಿ ಬಡಗು ರಾಜ್ಯದ ದುರ್ಬಿಷ್ಠೆ ಕಳೆದು, ತೆಂಕಣ ರಾಜ್ಯದ ದುರ್ಬಿಷ್ಠೆ ಕಳೆಯಲು ಮಾಯಕದಲ್ಲಿ ಪಯಣ ಮಾಡುವಾಗ ಉರ್ವ ಬೋಳೂರಿನ ಸಮುದ್ರ ತಟ್ಟಕ್ಕೆ (ಈಗಿರುವ ಕೊರಗಜ್ಜ ಕ್ಷೇತ್ರಕ್ಕೆ ) ಬಂದು ಕಿಂಕ್ಕಿನ (ಸಣ್ಣ) ಕಲ್ಲಿನಲ್ಲಿ ಕುಳಿತು ಉರ್ವ ಬೋಳೂರು ಮಾರಿಯಮ್ಮನಿಗೆ ಮಾಯದಲ್ಲಿ ಭೇಟಿ ಕೊಟ್ಟಂತಹ ಪುಣ್ಯ ಸನ್ನಿಧಿಯೇ ಶ್ರೀ ಕೊರಗಜ್ಜ ಕ್ಷೇತ್ರ ಉರ್ವ ಬೋಳೂರು.
ತದ ನಂತರ ಶ್ರೀ ದೈವವೂ ಕುತ್ತಾರು ಸಾರಾಲ ಪಟ್ಟಕ್ಕೆ ಹೋಗಿ ಸೋಮೇಶ್ವರದಲ್ಲಿ ಶ್ರೀ ಸೋಮಾನಾಥೇಶ್ವರನ ಭೇಟಿ ಮಾಡಿ ಕುತ್ತಾರು ಮೂರು ಗ್ರಾಮದ ಅರಸು ಸ್ಥಾನದಲ್ಲಿ ಇರುವ ಪಂಜಂದಾಯ, ಬಂಟ, ವೈದ್ಯನಾಥ ದೈವಗಳಲ್ಲಿಗೆ ಒಬ್ಬ ಪ್ರಧಾನಿ ಎಂದು ಕರೆಸಿ ಕುತ್ತಾರು ಮೂಲ ಸ್ಥಾನ ಎಂದು ಕರೆಯಿಸಿ ತುಳುನಾಡಿನ ಉದ್ದ ಅಗಲಕ್ಕೂ ಕೀರ್ತಿ ಮೆರೆಸಿದಂತಹ ಶಕ್ತಿ ಸ್ವಾಮಿ ಕೊರಗಜ್ಜ.
ಶ್ರೀ ಕ್ಷೇತ್ರದ ಕೊರಗಜ್ಜನಿಗೆ ಮುಂದಿನ ವರ್ಷ ದಿನಾಂಕ :19-04-2025 ವಾರ್ಷಿಕ ನೇಮೋತ್ಸವದಂದು " ಬಂಗಾರದ ಮುಟ್ಟಾಲೆ "ಯನ್ನು ಸಮರ್ಪಿಸಲಾಗುದು ಈ ಪುಣ್ಯ ಕಾರ್ಯದಲ್ಲಿ ಸದ್ಭಕ್ತರಾದ ನೀವು ನಮ್ಮೊಂದಿಗೆ ಭಾಗಿಯಾಗಿ ಸ್ವಾಮಿ ಕೊರಗಜ್ಜನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
" ಬಂಗಾರದ ಮುಟ್ಟಾಲೆ " ಸಮರ್ಪಣೆಗೆ ನೀವು ನೀಡುವ ನಗದು ಮತ್ತು ಪುತಾಳಿ ಚಿನ್ನ (999)ವನ್ನು ಸ್ವೀಕರಿಸಲಾಗುವುದು.